ಪ್ರಕಾಶ್ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಕಾಶ್ರೈ ಅವರು ನಿರ್ಮಿಸಿರುವ ‘ಒಗ್ಗರಣೆ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಖ್ಯಾತ ನಟ ಪ್ರಕಾಶ್ರೈ ನಿರ್ದೇಶನದ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ. ಪ್ರೀತ ಛಾಯಾಗ್ರಹಣ, ಜೋ.ನಿ.ಹರ್ಷ ಸಂಕಲನ ಹಾಗೂ ಪೋನಿ ವರ್ಮ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಕಾಶ್ರೈ, ಸ್ನೇಹ, ಊರ್ವಶಿ, ಮಂಡ್ಯ ರಮೇಶ್, ಅಚ್ಯುತಕುಮಾರ್ ತೇಜಸ್, ಸಂಯುಕ್ತ ಹೊರನಾಡು, ಮುಂತಾದವರಿದ್ದಾರೆ.